Chinakurali, Pandavapura Taluk, Mandya - 571455
08236 295333 | jnanavikasa9@gmail.com
Women & child support

Jnana Matha Mahila Sahayavani Santwana Kendra

Counselling, protection and support for women and girls facing harassment and violence.

ಜ್ಞಾನ ಮಾತಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ

ಶ್ರೀದೇವಿ ನಿಲಯ, ಚಿಕ್ಕಮಸೀದಿ ಬೀದಿ, ಪಾಂಡವಪುರ ಪಟ್ಟಣ, ಮಂಡ್ಯ ಜಿಲ್ಲೆ, ಕರ್ನಾಟಕ.

ಜ್ಞಾನ ಮಾತಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ 2007ರಲ್ಲಿ ಸ್ಥಾಪನೆಗೊಂಡಿದ್ದು, ದಿನಾಂಕ 20/11/2007 ರಂದು ಜ್ಞಾನ ವಿಕಾಸ ಎಜುಕೇಷನ್ ಟ್ರಸ್ಟ್(ರಿ) ಚಿನಕುರಳಿ, ಪಾಂಡವಪುರ ಪಟ್ಟಣದ, ಮಂಡ್ಯ ಜಿಲ್ಲೆಯಲ್ಲಿ, ಅನುಷ್ಠಾನಗೊಂಡಿದೆ. ಕಳೆದ 10 ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯಚರಣೆಗೊಂಡಿದ್ದು ಮಹಿಳಾ ಮತ್ತು ಮಕ್ಕಳ ರಕ್ಷಣೆಯ ಮುಖ್ಯ ಉದ್ದೇಶವನ್ನು ಒಳಗೊಂಡು ಕಾರ್ಯಚರಣೆ ನಡೆಸುತ್ತಿದೆ.

ಸಹಾಯವಾಣಿಯಲ್ಲಿ ಹಮ್ಮಿಕೊಂಡಿರುವ ಮುಖ್ಯ ಕಾರ್ಯಕ್ರಮಗಳು:

  1. ದೂರವಾಣಿ ಸಂಪರ್ಕ ಮತ್ತು ಸಂವಹನ ವ್ಯವಸ್ಥೆ ರೂಪಿಸಿರುತ್ತೇವೆ.
  2. ಕೌನ್ಸಿಲಿಂಗ್ (ಸಲಹೆ) ಮತ್ತು ಜಾಗೃತಿ ಮೂಡಿಸಿರುತ್ತೇವೆ.
  3. ಅಗತ್ಯವುಳ್ಳ ತರಬೇತಿ ಕಾರ್ಯಕ್ರಮಗಳನ್ನು ವಿವಿಧ ಮೂಲಗಳಿಂದ ವ್ಯವಸ್ಥೆ ಮಾಡಿರುತ್ತೇವೆ.
  4. ಸಾಕ್ಷರತೆ ಮತ್ತು ಓದು ಬರಹ ಕಾರ್ಯಕ್ರಮವನ್ನು ಸಹ ರೂಪಿಸಿದ್ದೇವೆ.
  5. ಕಾನೂನು ಜಾಗೃತಿ ಮತ್ತು ನಾಯಕತ್ವ ತರಬೇತಿ ಕಲ್ಪಿಸಿರುತ್ತೇವೆ.
  6. ಕಾನೂನು ರೀತಿ ನ್ಯಾಯ ಪಡೆಯಲು ಮಾರ್ಗದರ್ಶನ ನೀಡಿರುತ್ತೇವೆ.
  7. ಉದ್ಯಮ ಶೀಲತಾ ಜಾಗೃತಿ ಮತ್ತು ಉದ್ಯಮ ಶೀಲಾ ಕೌಶಲ್ಯಗಳ ಅಭಿವೃದ್ಧಿ ಬಗ್ಗೆ ಕಾರ್ಯಕ್ರಮ ರೂಪಿಸಿರುತ್ತೇವೆ.
  8. ಕೇಂದ್ರಕ್ಕೆ ಬಂದ ಮಹಿಳೆ ಮತ್ತು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ರೂಪಿಸುವುದು ಮತ್ತು ಶಾಲೆಗೆ ಸೇರಿಸುವುದಕ್ಕೆ ಪ್ರಯತ್ನ ಮಾಡುತ್ತೇವೆ.
  9. ಪುನರ್ವಸತಿಗಾಗಿ ನೆರವು ಕೊಡಿಸುತ್ತೇವೆ.
  10. ಅವರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಮತ್ತು ಸಮಾನವಾಗಿ ಬದುಕಲು ಬೇಕಾದ ಇತರೆ ಪೂರಕ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತೇವೆ.

ಇತರೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದು, ಅಗತ್ಯ ಮತ್ತು ವ್ಯವಸ್ಥೆಗೆ ಅನುಸಾರವಾಗಿ ಇನ್ನೂ ಮುಂತಾದ ಸಹ ಕಾರ್ಯಕ್ರಮಗಳನ್ನು ಕೇಂದ್ರದಲ್ಲಿ ರೂಪಿಸಲಾಗುತ್ತಿದೆ.

ಕೌನ್ಸಿಲಿಂಗ್ ಮತ್ತು ಮಾರ್ಗದರ್ಶನ:

  1. ಪೊಲೀಸ್ ನೆರವು ಮತ್ತು ರಕ್ಷಣೆ
  2. ಆರ್ಥಿಕ ನೆರವು
  3. ಉಚಿತ ಕಾನೂನು ಸಲಹೆ ಮತ್ತು ನೆರವು
  4. ಅಲ್ಪಾವಧಿ ತಂಗುದಾಣ ಮತ್ತು ವೈದ್ಯಕೀಯ ಸೌಲಭ್ಯ
  5. ದೌರ್ಜನ್ಯಕ್ಕೊಳಗಟ್ಟ ಅಪ್ರಾಪ್ತ ಬಾಲಕಿಯರಿಗೆ ಶಿಕ್ಷಣ
  6. ಆಪ್ತ ಸಮಾಲೋಚನ ಮತ್ತು ಮಾರ್ಗದರ್ಶನ
  7. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
  8. ಸ್ನಾನಗೃಹ ಹಾಗೂ ಶೌಚಾಲಯ ವ್ಯವಸ್ಥೆ
  9. ಕಛೇರಿಗೆ ಬೇಕಾದ ಪೀಠೋಪಕರಣಗಳು
ಹೆಚ್ಚಿನ ಮಾಹಿತಿಗಾಗಿ ನಮ್ಮ ಕಚೇರಿಯನ್ನು ಸಂಪರ್ಕಿಸಿ.

A centre for support and recovery

JVET's work includes personal consultation and counselling, protection, and psychological and moral strengthening for girls and women affected by sexual harassment, dowry harassment and violence.

Contact

Counsellor: Bhagya

08236-255283
7760803929

santwanakendrapandavapura@gmail.com